ಮುಂಬೈ: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಸಂದರ್ಶನವೊಂದರಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.
ತಾವು ಕ್ರಿಕೆಟ್ ಕಲಿಯಲು ಆರಂಭಿಸಿದ ದಿನದಲ್ಲಿ ತೀರಾ ಬಡತನವಿತ್ತು. ಕ್ರಿಕೆಟ್ ಶೂ ಹಾಕಿಕೊಳ್ಳದೇ ಸಮ್ಮರ್ ಕ್ಯಾಂಪ್ ಗೆ ಬಂದಿದ್ದಕ್ಕೆ ಕೋಚ್ ಅವಮಾನ ಮಾಡಿದ್ದರು ಎಂದು ಉಮೇಶ್ ನೆನೆಸಿಕೊಂಡಿದ್ದಾರೆ.
‘ನಾಗ್ಪುರ ಜಿಲ್ಲಾ ತಂಡದ ಪರ ಅತ್ಯುತ್ತಮವಾಗಿ ಆಡಿದ್ದಕ್ಕೆ ನನ್ನನ್ನು ಸಮ್ಮರ್ ಕ್ಯಾಂಪ್ ಗೆ ಕಳುಹಿಸಿದ್ದರು. ಆದರೆ ಅಲ್ಲಿ ಹೋದಾಗ ನನ್ನ ಬಳಿ ಶೂ ಕೂಡಾ ಇರಲಿಲ್ಲ. ಕೋಚ್ ನನ್ನ ನೋಡಿ ಈತನಿಗೆ ಕ್ರಿಕೆಟ್ ಶೂ ಎಂದರೆ ಏನೆಂದೇ ಗೊತ್ತಿಲ್ಲ. ಇಂತಹವರನ್ನೆಲ್ಲಾ ಇಲ್ಲಿಗೆ ಯಾಕೆ ಕರೆಸುತ್ತೀರಿ ಎಂದು ಅವಮಾನ ಮಾಡಿದ್ದರು’ ಎಂದು ಉಮೇಶ್ ಹೇಳಿದ್ದಾರೆ. ಆದರೆ ಆ ಬಳಿಕ ದುಲೀಪ್ ಟ್ರೋಫಿ ಪಂದ್ಯದಲ್ಲಿ ದ್ರಾವಿಡ್, ಲಕ್ಷ್ಮಣ್ ವಿರುದ್ಧ ಆಡಿ ಅವರ ವಿಕೆಟ್ ಕಬಳಿಸಿದ ಮೇಲೆ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು ಎಂದು ಹೇಳಿದ್ದಾರೆ.