Publish Date: Sat, 06 Jun 2020 (10:41 IST)
Updated Date: Sat, 06 Jun 2020 (10:43 IST)
ಮುಂಬೈ: ಕೊರೋನಾದಿಂದಾಗಿ ಯಾವುದೇ ಟೂರ್ನಮೆಂಟ್ ಗಳೂ ನಡೆಯದೇ ಬಿಸಿಸಿಐ ಆರ್ಥಿಕವಾಗಿ ಸಾಕಷ್ಟು ಅನುಭವಿಸಿದೆ. ಹೀಗಾಗಿ ಹಣಕಾಸು ಪರಿಸ್ಥಿತಿ ಸುಧಾರಿಸಲು ಹಲವು ಕ್ರಮ ಕೈಗೊಳ್ಳಲಿದೆ.
ಐಪಿಎಲ್ ಸೇರಿದಂತೆ ಪ್ರಮುಖ ಟೂರ್ನಿಗಳು ನಡೆಯದೇ ಬಿಸಿಸಿಐಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಆದರೆ ಅದಕ್ಕಾಗಿ ಆಟಗಾರರ ವೇತನ ಕಡಿತ ಮಾಡುವುದಿಲ್ಲ ಎಂದು ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಹೇಳಿದ್ದಾರೆ.
ಆದರೆ ವೆಚ್ಚ ಕಡಿತಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಅದಕ್ಕಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಅರುಣ್ ಹೇಳಿದ್ದಾರೆ.