Publish Date: Mon, 31 Aug 2020 (11:23 IST)
Updated Date: Mon, 31 Aug 2020 (11:30 IST)
ದುಬೈ: ಐಪಿಎಲ್ ಆಡಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ದಿಡೀರ್ ವಾಪಸಾತಿ ನಿಗೂಢವಾಗಿದೆ.
ವೈಯಕ್ತಿಕ ಕಾರಣ ನೀಡಿ ರೈನಾ ಐಪಿಎಲ್ ಕೂಟದಿಂದಲೇ ಹೊರನಡೆದಿದ್ದಾರೆ. ಆದರೆ ಆ ವೈಯಕ್ತಿಕ ಕಾರಣ ಅವರ ಕುಟುಂಬದಲ್ಲಿ ನಡೆದಿದ್ದ ಕೊಲೆಗಳು ಕಾರಣವಿರಬಹುದು ಎಂದು ಒಮ್ಮೆ ಸುದ್ದಿಯಾದರೆ, ಇನ್ನೊಂದು ಮೂಲಗಳು ರೈನಾಗೆ ಕೊರೋನಾ ಆತಂಕ ಶುರುವಾಗಿತ್ತು ಎನ್ನುತ್ತಿವೆ. ಈ ನಡುವೆ ಸ್ಥಳೀಯ ದೈನಿಕವೊಂದಕ್ಕೆ ರೈನಾ ಹೇಳಿಕೆ ನೀಡಿದ್ದು ‘ನನ್ನ ಮಕ್ಕಳಿಗಿಂತ ದೊಡ್ಡದು ಬೇರೆ ಏನೂ ಇಲ್ಲ’ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಚೆನ್ನೈ ಮಾಲಿಕ ಎನ್ ಶ್ರೀನಿವಾಸನ್ ನಾವು ಯಾರನ್ನೂ ಕೂಡಿಟ್ಟುಕೊಳ್ಳಲ್ಲ ಎಂದು ರೈನಾ ಮೇಲೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ದುಬೈನಲ್ಲಿ ಧೋನಿ ನೀಡಿದಂತಹದ್ದೇ ಹೋಟೆಲ್ ಕೊಠಡಿ ತನಗೂ ನೀಡಬೇಕು ಎಂದು ರೈನಾ ಆಗ್ರಹಿಸಿದ್ದರು. ಈ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಧೋನಿ ಜತೆಗೆ ಈ ವಿಚಾರವಾಗಿ ವಿರಸವೇರ್ಪಟ್ಟಿತ್ತು ಎಂಬ ಸುದ್ದಿಗಳೂ ಓಡಾಡುತ್ತಿವೆ. ಆದರೆ ಯಾವುದು ನಿಜ ಎಂಬುದು ನಿಗೂಢವಾಗಿಯೇ ಉಳಿದಿದೆ.