Publish Date: Sun, 08 Nov 2020 (10:27 IST)
Updated Date: Sun, 08 Nov 2020 (10:28 IST)
ಮುಂಬೈ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೊಗಳಿಕೆಯ ಮಾತನಾಡಿದ್ದು, ರಾಹುಲ್ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಗೆಲ್ಲುವ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ.
ರಾಹುಲ್ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಮಿಂಚಬಲ್ಲರು. ಆದರೆ ಅವರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ತಳವೂರಲು ಇನ್ನೂ ಸಾಕಷ್ಟು ಸಮಯವಿದೆ. ಐಪಿಎಲ್ ನಲ್ಲಿ ಅವರು ರನ್ ಗಳಿಸಿದಾಗಲೆಲ್ಲಾ ತಂಡಕ್ಕೆ ಸೋಲಾಗಿರಬಹುದು. ಆದರೆ ಟೀಂ ಇಂಡಿಯಾದಲ್ಲಿ ಅವರು ಗಳಿಸುವ ರನ್ ಗಳೆಲ್ಲವೂ ಗೆಲುವಾಗಲಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ, ಇದರಲ್ಲಿ ನನ್ನ ನಿರ್ಧಾರವಿಲ್ಲ ಎಂದಿದ್ದಾರೆ.