Publish Date: Mon, 29 Jun 2020 (09:58 IST)
Updated Date: Mon, 29 Jun 2020 (10:01 IST)
ನವದೆಹಲಿ: ಲಾಕ್ ಡೌನ್ ನಿಂದಾಗಿ ಕ್ರಿಕೆಟಿಗರಿಗೆ ಈಗ ತಮ್ಮ ಮೆಚ್ಚಿನ ಕ್ರಿಕೆಟ್ ಆಡಲು ಸಾಧ‍್ಯವಾಗುತ್ತಿಲ್ಲ. ಈ ಬಿಡುವಿನ ವೇಳೆಯಲ್ಲಿ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಕುಟುಂಬದವರ ಜತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ಮೊನ್ನೆಯಷ್ಟೇ ಎರಡು ಶ್ವಾನ ದತ್ತು ಪಡೆದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಶಿಖರ್ ಧವನ್ ಇಂದು ಮತ್ತೆ ತಮ್ಮ ಮತ್ತೊಂದು ಪ್ರತಿಭೆಯ ಅನಾವರಣ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿಖರ್ ಧವನ್ ಬಾಲಿವುಡ್ ಸಿನಿಮಾದ ಹಳೆಯ ಹಾಡು ‘ಕುಚ್ ನಾ ಕಹೋ, ಕಚ್ ಭೀ ನಾ ಕಹೋ’ ಹಾಡನ್ನು ಕೊಳಲಿನಲ್ಲಿ ಅದ್ಭುತವಾಗಿ ನುಡಿಸುತ್ತಿರುವ ವಿಡಿಯೋ ಪ್ರಕಟಿಸಿದ್ದು, ಈ ಲಾಕ್ ಡೌನ್ ವೇಳೆಯಲ್ಲಿ ತಮ್ಮ ಹೊಸ ಪ್ರತಿಭೆಯ ಅನಾವರಣ ಮಾಡಿದ್ದಾರೆ.