ಮುಂಬೈ: 2021 ಮತ್ತು 2023 ರ ವಿಶ್ವಕಪ್ ನಲ್ಲಿ ಭಾಗವಹಿಸಲು ಪಾಕ್ ಆಟಗಾರರಿಗೆ ವೀಸಾ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬಿಸಿಸಿಐ ಖಡಕ್ ಪ್ರಶ್ನೆ ಕೇಳಿದೆ.
ಭಾರತದಲ್ಲಿ ನಡೆಯಲಿರುವ ಈ ಎರಡು ವಿಶ್ವಕಪ್ ಕೂಟದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಅನುವು ಮಾಡಿಕೊಡಬೇಕು. ಇದಕ್ಕೆ ಭಾರತ ಸರ್ಕಾರದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಲಿಖಿತ ಭರವಸೆ ಕೊಡಿಸಬೇಕು ಎಂದು ಐಸಿಸಿ ಮೂಲಕ ಬಿಸಿಸಿಐಗೆ ಒತ್ತಡ ಹೇರಲು ಪಾಕ್ ಮುಂದಾಗಿತ್ತು.
ಇದಕ್ಕೆ ಖಡಕ್ ಪ್ರತಿಕ್ರಿಯಿಸಿರುವ ಬಿಸಿಸಿಐ ನಮ್ಮ ನೆಲದಲ್ಲಿ ನಿಮ್ಮವರಿಂದ ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆ ನಡೆಯಲ್ಲ ಎಂದು ಭರವಸೆ ಕೊಡಿಸಬಲ್ಲಿರಾ ಎಂದು ಪ್ರಶ್ನಿಸಿದೆ. ಹೀಗಾಗಿ ಮತ್ತೆ ಭಾರತ-ಪಾಕಿಸ್ತಾನ ಕ್ರಿಕೆಟ್ ವಿಚಾರದಲ್ಲಿ ಮಂಡಳಿಗಳ ನಡುವೆ ಗುದ್ದಾಟ ನಡೆಯುವುದು ಗ್ಯಾರಂಟಿಯಾಗಿದೆ.