Publish Date: Tue, 22 Oct 2019 (09:02 IST)
Updated Date: Tue, 22 Oct 2019 (09:03 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಪದಚ್ಯುತಿಗೊಂಡ ಸರ್ಫರಾಜ್ ಅಹಮ್ಮದ್ ಪತ್ನಿ ಧೋನಿ ಜತೆ ಹೋಲಿಕೆ ಮಾಡಿ ತನ್ನ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಫರಾಜ್ ನಾಯಕತ್ವದಿಂದ ಕೊಕ್ ನೀಡಿದ ಕಾರಣ ನಿವೃತ್ತಿ ಹೇಳುತ್ತಾರಾ ಎಂದು ಮಾಧ್ಯಮದವರು ಕೇಳಿದಾಗ ಪತ್ನಿ ಖುಷ್ಬತ್ ಸರ್ಫರಾಜ್ ‘ಅವರು ಯಾಕೆ ನಿವೃತ್ತಿಯಾಗಬೇಕು? ಅವರಿಗಿನ್ನೂ ಕೇವಲ 32 ವರ್ಷ. ಧೋನಿಗೆ ಎಷ್ಟು ವರ್ಷವಾಯಿತು? ಅವರೇನಾದರೂ ನಿವೃತ್ತಿಯಾಗಿದ್ದಾರಾ? ನನ್ನ ಗಂಡನೂ ಫೈಟರ್. ಅವರು ಕಮ್ ಬ್ಯಾಕ್ ಮಾಡ್ತಾರೆ’ ಎಂದಿದ್ದಾರೆ.
ಅಷ್ಟೇ ಅಲ್ಲ, ಪಾಕ್ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ತಾವು ಗೌರವಿಸುತ್ತೇವೆ. ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಬೇಸರವಿಲ್ಲ ಎಂದು ಪತಿಯ ಪರವಾಗಿ ಖುಷ್ಬತ್ ಬ್ಯಾಟ್ ಮಾಡಿದ್ದಾರೆ.