ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ದ.ಆಫ್ರಿಕಾ ಬ್ಯಾಟ್ಸ್ ಮನ್ ಗಳು ಒಂದೇ ದಿನ 16 ವಿಕೆಟ್ ಕಳೆದುಕೊಂಡು 18 ವರ್ಷಗಳ ಬಳಿಕ ಹೀನಾಯ ಸಾಧನೆಯೊಂದನ್ನು ಮಾಡಿದ್ದಾರೆ.
2001-02 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದ.ಆಫ್ರಿಕಾ ಒಂದೇ ದಿನ 16 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿತ್ತು. ಅದಾದ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಆಫ್ರಿಕಾಗೆ ಇಂಥಾ ದಯನೀಯ ಸ್ಥಿತಿ ಬಂದಿರಲಿಲ್ಲ.
ಆದರೆ ಇಂದು ಟೀಂ ಇಂಡಿಯಾ ವೇಗಿಗಳು ಮತ್ತು ಸ್ಪಿನ್ನರ್ ಗಳ ದಾಳಿಗೆ ಸಂಪೂರ್ಣ ತಡಬಡಾಯಿಸಿದ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಒಂದೇ ದಿನ 16 ವಿಕೆಟ್ ಕಳೆದುಕೊಂಡು ಮತ್ತೆ ಆ ಸ್ಥಿತಿಯನ್ನೇ ಮೈಮೇಲೆಳದುಕೊಂಡರು. ಆಫ್ರಿಕಾದ ಈ ದಯನೀಯ ಸ್ಥಿತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.