ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಕೂಟದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಗೆ ಈ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಸಾಮಾನ್ಯವಾಗಿ ರೋಹಿತ್, ಶಿಖರ್ ಧವನ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ. ಇವರಿಬ್ಬರ ನಡುವಿನ ಹೊಂದಾಣಿಕೆ ಚೆನ್ನಾಗಿರುವುದರಿಂದಲೇ ಅವರು ವಿಶ್ವದ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.
ಆದರೆ ಇದೀಗ ಧವನ್ ಗಾಯಗೊಂಡಿರುವುದರಿಂದ ರೋಹಿತ್ ರಾಹುಲ್ ಜತೆಗೆ ಕಣಕ್ಕಿಳಿಯಬೇಕಾಗಿದೆ. ಹೀಗಾಗಿ ಹೊಸ ಜತೆಗಾರನಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದೇ ಕಾರಣಕ್ಕೆ ಪಾಕ್ ವಿರುದ್ಧದ ಪಂದ್ಯದಲ್ಲಿ ಹೊಂದಾಣಿಕೆ ಕೊರತೆಯಿಂದ ಎರಡು ಬಾರಿ ರನೌಟ್ ಆಗುವ ಅಪಾಯವೂ ಎದುರಾಗಿತ್ತು.
ಹೀಗಾಗಿ ಆ ಪಂದ್ಯದ ನಂತರ ರೋಹಿತ್, ರಾಹುಲ್ ಜತೆಗೆ ಹೆಚ್ಚು ಸಂಭಾಷಣೆ ನಡೆಸಿದ್ದಾರಂತೆ. ವಿಕೆಟ್ ನಡುವೆ ತಾವು ಹೇಗೆ ಹೊಂದಾಣಿಕೆಯಿಂದ ರನ್ ಗಳಿಸಬೇಕು ಎಂಬುದರ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರಂತೆ. ಇದರಿಂದ ಭಾರತಕ್ಕೆ ಪ್ರತೀ ಪಂದ್ಯದಲ್ಲೂ ಉತ್ತಮ ಅಡಿಪಾಯ ಹಾಕಿಕೊಡಲು ರೋಹಿತ್ ಮತ್ತು ರಾಹುಲ್ ಯೋಜನೆ ರೂಪಿಸುತ್ತಿದ್ದಾರಂತೆ. ಇವರ ಈ ಪ್ಲ್ಯಾನ್ ಯಶಸ್ವಿಯಾದರೆ ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.