Publish Date: Wed, 23 Dec 2020 (10:17 IST)
Updated Date: Wed, 23 Dec 2020 (10:18 IST)
ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ನಲ್ಲಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಡಿಸೆಂಬರ್ 30 ರಿಂದ ಅಭ್ಯಾಸಕ್ಕಿಳಿಯಲಿದ್ದಾರೆ.
ಸದ್ಯಕ್ಕೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಅವಧಿಯಲ್ಲಿರುವ ರೋಹಿತ್ 30 ರಿಂದ ಅಭ್ಯಾಸ ಆರಂಭಿಸಿ ಮೂರನೇ ಟೆಸ್ಟ್ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಸಿಡ್ನಿಯಲ್ಲಿರುವ ರೋಹಿತ್ ವಿಕ್ಟೋರಿಯಾ ಸರ್ಕಾರ ನೀಡಿದ ಎರಡು ಬೆಡ್ ರೂಂಗಳ ಅಪಾರ್ಟ್ ಮೆಂಟ್ ನಲ್ಲಿ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಮೂಲಗಳ ಪ್ರಕಾರ ಬಿಸಿಸಿಐ ಅವರನ್ನು ಭಾರತೀಯ ತಂಡವಿರುವ ಮೆಲ್ಬೋರ್ನ್ ಗೆ ಸ್ಥಳಾಂತರಿಸಲು ಆಸ್ಟ್ರೇಲಿಯಾಕ್ಕೆ ಮನವಿ ಮಾಡಿತ್ತು. ಆದರೆ ಅದಕ್ಕೆ ಸ್ಥಳೀಯಾಡಳಿತ ಅವಕಾಶ ಕೊಡಲಿಲ್ಲ ಎನ್ನಲಾಗಿದೆ.