Publish Date: Wed, 23 Dec 2020 (10:07 IST)
Updated Date: Wed, 23 Dec 2020 (10:08 IST)
ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಹೊಸ ತಂಡಗಳ ಸೇರ್ಪಡೆ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಇಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ತೀರ್ಮಾನವಾಗುವ ಸಾಧ‍್ಯತೆಯಿದೆ.
ಇಂದು ಅಹಮ್ಮದಾಬಾದ್ ನಲ್ಲಿ ಬಿಸಿಸಿಐ ಸಭೆ ಸೇರಲಿದೆ. ಈ ಸಭೆಯಲ್ಲಿ ಮುಂದಿನ ಐಪಿಎಲ್ ಗೆ 10 ತಂಡಗಳ ಸೇರ್ಪಡೆ ಮಾಡಬೇಕೋ ಅಥವಾ ಯಥಾ ಸ್ಥಿತಿ ಮುಂದುವರಿಸಬೇಕೋ ಎಂಬ ವಿಚಾರದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಅದಲ್ಲದೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸ್ವಹಿತಾಸಕ್ತಿ ಸಂಘರ್ಷದ ಬಗ್ಗೆ ಚರ್ಚೆಯಾಗಲಿದೆ. ಇದಲ್ಲದೆ, ದೇಶೀಯ ಕ್ರಿಕೆಟ್ ಆಯೋಜನೆ ಕುರಿತೂ ತೀರ್ಮಾನವಾಗುವ ಸಾಧ್ಯತೆಯಿದೆ.