Publish Date: Wed, 08 Aug 2018 (09:17 IST)
Updated Date: Wed, 08 Aug 2018 (09:20 IST)
ಲಾರ್ಡ್ಸ್: ಒಬ್ಬ ಆಟಗಾರ ತಂಡಕ್ಕೇ ಆಯ್ಕೆಯಾಗಲಿಲ್ಲ, ಇನ್ನೊಬ್ಬ ಆಟಗಾರನಿಗೆ ತಂಡಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಸ್ಥಾನವಿಲ್ಲ. ಇವರಿಬ್ಬರ ನಡುವಿನ ಸಂಭಾಷಣೆ ಇದೀಗ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಕುಲದೀಪ್ ಯಾದವ್ ನಡುವಿನ ಸಂಭಾಷಣೆ ಟೀಂ ಇಂಡಿಯಾ ಆಯ್ಕೆಗಾರರಿಗೆ ಕೊಟ್ಟ ಟಾಂಗ್ ನಂತಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಕುಲದೀಪ್ ಯಾದವ್ ಲಂಡನ್ ನಲ್ಲಿ ತಿರುಗಾಡುತ್ತಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು.
ಫೋಟೋ ಜತೆಗೆ ಕುಲದೀಪ್ ಯಾದವ್ ‘ಅತ್ತಿತ್ತ ಸುತ್ತಾಡುತ್ತಾ ನನ್ನ ಸುತ್ತಲಿನ ಹೊಸ ಜಗತ್ತನ್ನು ನೋಡುತ್ತಾ ಕಾಲ ಕಳೆಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ರೋಹಿತ್ ತಕ್ಷಣ ‘ಇದನ್ನೇ ಮಾಡ್ತಾ ಇರು’ ಎಂದು ಕಾಲೆಳೆದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕುಲದೀಪ್ ಯಾದವ್ ‘ನಿಮ್ಮ ಕಂಪನಿಯನ್ನು ಮಿಸ್ ಮಾಡ್ತಿದ್ದೇನೆ ರೋಹಿತ್ ಬಾಯ್’ ಎಂದಿದ್ದಾರೆ. ಈ ಮೂಲಕ ತಾವಿಬ್ಬರೂ ಆಯ್ಕೆಯಾಗದ ದುರದೃಷ್ಟವಂತರು ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.