Publish Date: Sun, 03 Jan 2021 (09:29 IST)
Updated Date: Sun, 03 Jan 2021 (09:33 IST)
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಶಬ್ನಂ ಗಿಲ್, ರಿಷಬ್ ಪಂತ್, ನವದೀಪ್ ಸೈನಿ ಮುಂತಾದವರು ಜೈವಿಕ ವಲಯದ ನಿಯಮಗಳನ್ನು ಮುರಿದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿನ್ನೆಯಷ್ಟೇ ಅಭಿಮಾನಿಯೊಬ್ಬರು ಈ ಕ್ರಿಕೆಟಿಗರು ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಹಾಕಿದ್ದಲ್ಲದೆ, ಅವರ ಬಿಲ್ ನಾನು ಪಾವತಿಸಿದೆ ಎಂದು ಬರೆದುಕೊಂಡಿದ್ದರು. ಈ ವಿಚಾರವೇ ಈಗ ರೋಹಿತ್ ಮತ್ತು ಟೀಂಗೆ ಕಂಟಕವಾಗಿದೆ. ಇವರು ಜೈವಿಕ ವಲಯದ ನಿಯಮ ಮುರಿದು ಹೊರಗಡೆ ತೆರಳಿರುವ ಕುರಿತು ಬಿಸಿಸಿಐ ತನಿಖೆ ನಡೆಸಿ ಐವರು ಆಟಗಾರರಿಗೆ ಐಸೋಲೇಷನ್ ನಲ್ಲಿರಲು ಸೂಚಿಸಿದೆ. ಕೊರೋನಾ ಕಾರಣದಿಂದ ಉಭಯ ತಂಡಗಳೂ ಕೆಲವು ಸ್ಟ್ರಿಕ್ಟ್ ನಿಯಮಾವಳಿಯನ್ನು ಪಾಲಿಸಲೇಬೇಕಿದೆ. ಆದರೆ ಈ ಕ್ರಿಕೆಟಿಗರು ಈ ನಿಯಮಗಳನ್ನು ಮುರಿದು ಹೊರಗಡೆ ಊಟ ಮಾಡಿದ್ದರು.