Publish Date: Sat, 02 Jan 2021 (09:25 IST)
Updated Date: Sat, 02 Jan 2021 (09:28 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾರನ್ನು ಉಪನಾಯಕರಾಗಿ ಮಾಡಲಾಗಿದ್ದು, ಉಮೇಶ್ ಯಾದವ್ ಸ್ಥಾನಕ್ಕೆ ಯುವ ವೇಗಿ ಟಿ ನಟರಾಜನ್ ಗೆ ಬುಲಾವ್ ನೀಡಲಾಗಿದೆ.
ಫಿಟ್ ಟೀಂ ಇಂಡಿಯಾ ಕೂಡಿಕೊಂಡಿರುವ ರೋಹಿತ್ ಗೆ ಉಪನಾಯಕನ ಪಟ್ಟ ನೀಡಲಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಚೇತೇಶ್ವರ ಪೂಜಾರ ಉಪನಾಯಕರಾಗಿದ್ದರು. ಆದರೆ ಈಗ ರೋಹಿತ್ ಮರಳಿರುವುದರಿಂದ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಇನ್ನು, ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವೇಗಿ ಉಮೇಶ್ ಯಾದವ್ ಸ್ಥಾನಕ್ಕೆ ಯುವ ವೇಗಿ ಟಿ ನಟರಾಜನ್ ಗೆ ಅವಕಾಶ ನೀಡಲಾಗಿದೆ.