Publish Date: Mon, 21 Dec 2020 (09:23 IST)
Updated Date: Mon, 21 Dec 2020 (09:25 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಹಾ ಬದಲಿಗೆ ರಿಷಬ್ ಪಂತ್ ಕಣಕ್ಕಿಳಿಯುವ ಸಾಧ‍್ಯತೆ ಹೆಚ್ಚಿದೆ.
ಸಹಾ ಮೊದಲ ಟೆಸ್ಟ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ರಿಷಬ್ ಪಂತ್ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿದ್ದರು. ಹೀಗಾಗಿ ರಿಷಬ್ ರನ್ನು ಕಣಕ್ಕಿಳಿಸಲು ಒತ್ತಾಯ ಹೆಚ್ಚಿದೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ರಿಷಬ್ ಪಂತ್ ರನ್ನು ಕಣಕ್ಕಿಳಿಸುವುದು ಉತ್ತಮ ಎಂದಿದ್ದಾರೆ. ಕ್ರಿಕೆಟಿಗ ಮುರಳಿ ವಿಜಯ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಿಷಬ್ ಮತ್ತು ವೃದ್ಧಿಮಾನ್ ಸಹಾ ಇಬ್ಬರನ್ನೂ ಕಣಕ್ಕಿಳಿಸಬಹುದು ಎಂದು ಸಲಹೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ವೃದ್ಧಿಮಾನ್ ಬದಲಿಗೆ ಮುಂದಿನ ಟೆಸ್ಟ್ ಗೆ ರಿಷಬ್ ಪಂತ್ ಗೇ ಅವಕಾಶ ಸಿಗುವ ಎಲ್ಲಾ ಸಾಧ್ಯತೆಯಿದೆ.