ಅಡಿಲೇಡ್: ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಕ್ಕೊಳಗಾದ ವೇಗಿ ಮೊಹಮ್ಮದ್ ಶಮಿ ಸ್ಥಾನಕ್ಕೆ ಟೀಂ ಇಂಡಿಯಾಕ್ಕೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಇಶಾಂತ್ ಶರ್ಮಾರನ್ನು ಕರೆಸಿ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇಶಾಂತ್ ಶರ್ಮಾ ಸದ್ಯಕ್ಕೆ ಭಾರತದಲ್ಲಿದ್ದಾರೆ. ಶಮಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಅನುಭವಿ ವೇಗಿಯ ಅಗತ್ಯವಿದೆ. ಹೀಗಾಗಿ ತಕ್ಷಣವೇ ಇಶಾಂತ್ ರನ್ನು ಆಸ್ಟ್ರೇಲಿಯಾಗೆ ಕಳುಹಿಸುವುದು ಸೂಕ್ತ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಇಶಾಂತ್ ಈಗ ಆಸ್ಟ್ರೇಲಿಯಾಗೆ ತೆರಳಿದರೂ ದ್ವಿತೀಯ ಟೆಸ್ಟ್ ಗೆ ಲಭ್ಯರಾಗಲ್ಲ. ಯಾಕೆಂದರೆ ಆಸೀಸ್ ಗೆ ತೆರಳಿದರೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಲೇ ಬೇಕು.