Publish Date: Fri, 10 Aug 2018 (09:38 IST)
Updated Date: Fri, 10 Aug 2018 (09:40 IST)
ಲಾರ್ಡ್ಸ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋದಿಂದಾಗಿ ಭಾರೀ ಟ್ರೋಲ್ ಗೊಳಗಾಗುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರಬೇಕಾದರೆ ರವಿಶಾಸ್ತ್ರಿ ಪೆವಿಲಿಯನ್ ನಲ್ಲಿ ಕುಳಿತು ನಿದ್ದೆ ಮಾಡಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು.
ಅದೇ ವಿಚಾರವನ್ನಿಟ್ಟುಕೊಂಡು ರವಿಶಾಸ್ತ್ರಿಯನ್ನು ಇದೀಗ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು ರವಿಶಾಸ್ತ್ರಿ ಪಿಚ್ ಪರಿಶೀಲಿಸುತ್ತಿರುವ ಫೋಟೋವೊಂದನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಹಾಕಿದೆ. ಇದನ್ನು ನೋಡಿದ ಅಭಿಮಾನಿಗಳು ಕೆಲವರು ರವಿಶಾಸ್ತ್ರಿ ಕೈಯಲ್ಲಿ ತಲೆದಿಂಬು ಹಿಡಿದಂತೆ ಫೋಟೋ ಎಡಿಟ್ ಮಾಡಿ ಕೋಚ್ ರೆಡಿ ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದರಲ್ಲಿ ರವಿಶಾಸ್ತ್ರಿಯ ಉಬ್ಬು ಹೊಟ್ಟೆ ನೋಡಿ ರವಿಶಾಸ್ತ್ರಿ ಗರ್ಭಿಣಿಯೇ? ಎಂದು ಕಾಲೆಳೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.