Publish Date: Thu, 09 Aug 2018 (15:28 IST)
Updated Date: Thu, 09 Aug 2018 (15:29 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಳೆಯಿಂದಾಗಿ ಟಾಸ್ ತಡವಾಗಿದೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಸಣ್ಣಗೆ ಮಳೆ ಹನಿಯುತ್ತಿರುವುದರಿಂದ ಇನ್ನೂ ಟಾಸ್ ಪ್ರಕ್ರಿಯೆ ನಡೆದಿಲ್ಲ. ಪಿಚ್ ಒದ್ದೆಯಾಗದಂತೆ ಹೊದಿಕೆ ಹಾಕಲಾಗಿದೆ.
ಮೇಲ್ನೋಟಕ್ಕೆ ಇದು ಬ್ಯಾಟಿಂಗ್ ಪಿಚ್ ನಂತೆ ತೋರುತ್ತಿದ್ದರೂ, ಮಳೆ ಬಂದಿರುವುದರಿಂದ ಮೈದಾನ ಒದ್ದೆಯಾಗಿದ್ದು ಬೌಂಡರಿ ಗಳಿಸುವುದು ಕಷ್ಟವಾಗಲಿದೆ. ಅಷ್ಟೇ ಅಲ್ಲದೆ, ಒದ್ದೆ ವಾತಾವರಣ ಬೌಲರ್ ಗಳಿಗೂ ಸಹಕಾರಿಯಾಗಲಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ ಈ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡು ಗೆಲ್ಲುವ ಉತ್ಸಾಹದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.