Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಇನ್ ಸ್ಟಾಗ್ರಾಂ ಪುಟದಲ್ಲಿ ಸಿಎಸ್ ಕೆ ಜೊತೆಗಿನ ಎಲ್ಲಾ ಫೋಟೋಗಳನ್ನು ರವೀಂದ್ರ ಜಡೇಜಾ ಡಿಲೀಟ್ ಮಾಡುವುದರೊಂದಿಗೆ ಐಪಿಎಲ್ ಫ್ರಾಂಚೈಸಿ ಜೊತೆಗಿನ ವೈಮನಸ್ಯ ಹೆಚ್ಚಾಗಿದೆ ಎಂಬ ಗುಮಾನಿ ಮೂಡಿದೆ.
ಆದರೆ ಜಡೇಜಾ ಮುನಿಸಿಕೊಂಡಿರುವುದು ಸಿಎಸ್ ಕೆ ತಂಡದ ಮೇಲಲ್ಲ. ನಾಯಕ ಧೋನಿ ಮೇಲೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ.
ಪ್ರತೀ ವರ್ಷವೂ ಜಡೇಜಾ ತಮ್ಮ ಮೆಚ್ಚಿನ ನಾಯಕ ಧೋನಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರುತ್ತಾರೆ. ಆದರೆ ಈ ಬಾರಿ ಶುಭಾಷಯ ಕೋರುವ ಬದಲು ಸಿಎಸ್ ಕೆ ಜೊತೆಗಿನ ಫೋಟೋ ಡಿಲೀಟ್ ಮಾಡಿ ಅನುಮಾನಕ್ಕೆ ಕಾರಣವಾಗಿದ್ದರು. ಹೀಗಾಗಿ ಜಡೇಜಾ ಮುನಿಸು ಕೇವಲ ತಂಡದ ಮೇಲಲ್ಲ, ನಾಯಕ ಧೋನಿ ಮೇಲೆ ಎನ್ನಲಾಗುತ್ತಿದೆ.