Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಂಚಿ: ಭಾರತೀಯ ಕ್ರಿಕೆಟ್ ನ ಅತ್ಯಂತ ಯಶಸ್ವೀ ನಾಯಕ ಧೋನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 41 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಧೋನಿ ಐಪಿಎಲ್ ನಲ್ಲಿ ಚೆನ್ನೈ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿ ಬಳಗವೂ ದೊಡ್ಡದಾಗಿದೆ.
ಈಗ ಕ್ಯಾಪ್ಟನ್ ಕೂಲ್ 41 ನೇ ಬರ್ತ್ ಡೇಗೆ ವಿಜಯವಾಡದ ಅಭಿಮಾನಿ ಬಳಗವೊಂದು 41 ಅಡಿ ಎತ್ತರದ ಧೋನಿ ಕಟೌಟ್ ನಿರ್ಮಿಸಿದೆ. ಈ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದೆ.