Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತ್ತೆ ಮಂಕಡ್ ಔಟ್ ಜಪ ಶುರು ಮಾಡಿಕೊಂಡ ರವಿಚಂದ್ರನ್ ಅಶ್ವಿನ್

ಮತ್ತೆ ಮಂಕಡ್ ಔಟ್ ಜಪ ಶುರು ಮಾಡಿಕೊಂಡ ರವಿಚಂದ್ರನ್ ಅಶ್ವಿನ್
ದುಬೈ , ಮಂಗಳವಾರ, 25 ಆಗಸ್ಟ್ 2020 (12:20 IST)
ದುಬೈ: ಕಳೆದ ಬಾರಿ ಐಪಿಎಲ್ ಕೂಟದ ಮೊದಲ ಪಂದ್ಯದಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದರು.


ಬೌಲರ್ ಬಾಲ್ ಎಸೆಯುವ ಮೊದಲೇ ನಾನ್ ಸ್ಟ್ರೈಕರ್ ಎಂಡ್ ನಲ್ಲಿರುವ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟರೆ ಬೌಲರ್ ಗೆ ಆತನನ್ನು ರನೌಟ್ ಮಾಡಲು ಅವಕಾಶವಿದೆ. ಆದರೆ ಈ ರೀತಿ ಮಾಡುವುದು ನಿಯಮಗಳ ಪ್ರಕಾರ ತಪ್ಪಲ್ಲದೇ ಇದ್ದರೂ ನೈತಿಕತೆಯ ಪ್ರಶ್ನೆಯಿಂದಾಗಿ ವಿವಾದವಾಗಿತ್ತು.

ಇದೀಗ ಮತ್ತೆ ಅಶ್ವಿನ್ ಮಂಕಡ್ ಔಟ್ ಜಪ ಶುರು ಮಾಡಿಕೊಂಡಿದ್ದಾರೆ. ಈ ಬಾರಿ ಅಶ್ವಿನ್ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ. ಈ ಬಾರಿ ಮಂಕಡ್ ಔಟ್ ನಿಯಮದಲ್ಲಿ ಕೊಂಚ ಬದಲಾವಣೆ ತನ್ನಿ. ಅದನ್ನು  ಬಾಲರ್ ಗೆ ಫ್ರೀ ಬಾಲ್ ಎಂದು ಪರಿಗಣಿಸಿ ಇಲ್ಲವೇ ಬ್ಯಾಟಿಂಗ್ ತಂಡಕ್ಕೆ ಐದು ರನ್ ಕಳೆಯುವ ನಿಯಮ ಜಾರಿಗೆ ತನ್ನಿ ಎಂದು ಅಶ್ವಿನ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ಮಾಡಿದ ಕ್ರಿಸ್ ಗೇಲ್ ಗೆ ಕೊರೋನಾ ಪರೀಕ್ಷೆ: ವರದಿ ಏನಾಗಿದೆ ಗೊತ್ತಾ?!