ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋಲಲು ತಂಡದ ಆಯ್ಕೆಯೂ ಕಾರಣ ಎನ್ನಬಹುದು. ಹೀಗಾಗಿ ಅಭಿಮಾನಿಗಳ ಆಕ್ರೋಶ ಕೋಚ್ ರವಿಶಾಸ್ತ್ರಿ ಮೇಲೆ ತಿರುಗಿದೆ.
ಟೀಂ ಇಂಡಿಯಾ ಕೇವಲ 36 ರನ್ ಗೆ ಆಲೌಟ್ ಆಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ. ಹೀಗಾಗಿ ರವಿಶಾಸ್ತ್ರಿಯನ್ನು ಮೊದಲು ಕೋಚ್ ಸ್ಥಾನದಿಂದ ಕಿತ್ತು ಹಾಕಿ ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸಿದ್ದಾರೆ. ವಿಶ್ವದ ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನು ಹೊಂದಿರುವ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಸಂಪೂರ್ಣ ಎಡವಿದ್ದು ನೋಡಿ ನೀವು ಶ್ರೀಲಂಕಾ, ಬಾಂಗ್ಲಾದೇಶದೊಂದಿಗೆ ಟೆಸ್ಟ್ ಆಡಲು ಲಾಯಕ್ಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.