ಬೆಂಗಳೂರು: ರಾಹುಲ್ ದ್ರಾವಿಡ್ ಎಂದರೆ ಶಾಂತಮೂರ್ತಿ ಎಂದೇ ಪರಿಚಿತರು. ಅವರು ಮೈದಾನದಲ್ಲೂ ಅಷ್ಟೇ, ಹೊರಗಡೆಯೂ ಅಷ್ಟೇ, ಯಾವುದಕ್ಕೂ ಅತಿರೇಕವಾಗಿ ಪ್ರತಿಕ್ರಿಯಿಸಿದವರಲ್ಲ. ಹಾಗೆಯೇ ಆಟದಲ್ಲೂ ಅವರ ಶಾಂತ ಸ್ವಭಾವ ಎದ್ದು ಕಾಣುತ್ತಿತ್ತು.
ದ್ರಾವಿಡ್ ಹೀಗಿರುವುದಕ್ಕೆ ಅವರು ಚಿಕ್ಕವರಾಗಿದ್ದಾಗ ಬೆಳೆದು ಬಂದ ರೀತಿಯೇ ಕಾರಣವಂತೆ. ‘ಬಾಲ್ಯದಲ್ಲಿ ನಾನು ಹೈಪರ್ ಆಕ್ಟಿವ್ ಆಗಿರಲಿಲ್ಲ. ಅಂತರ್ಮುಖಿಯಾಗಿರುತ್ತಿದ್ದೆ. ಆದರೆ ಯಾವುದೇ ವಿಚಾರದಲ್ಲೂ ಹೆಚ್ಚು ಏಕಾಗ್ರತೆ ನೀಡುವ ಗುಣವಿತ್ತು. ಹೀಗಾಗಿ ಶಾಂತವಾಗಿ ಮತ್ತು ಸಮತೋಲನದಿಂದಿರುವ ಗುಣ ನನಗೆ ಬಂತು. ಬಹುಶಃ ಅದೇ ಕಾರಣಕ್ಕೆ ನಾನು ಮೈದಾನದಲ್ಲೂ ಶಾಂತವಾಗಿದ್ದೆ’ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.