ಬೇ ಓವಲ್: ವಿಶ್ವಕಪ್ ಎನ್ನುವ ಶಬ್ಧಕ್ಕೇ ವಿಶೇಷತೆಯಿದೆ. ವಿಶ್ವ ಚಾಂಪಿಯನ್ ಆಗುವುದು ಎಂದರೆ ತಮಾಷೆಯ ಮಾತಲ್ಲ. ಆದರೆ ರಾಹುಲ್ ದ್ರಾವಿಡ್ ಮಾತ್ರ ತಮ್ಮ ಹುಡುಗರ ಗೆಲ್ಲಿಸಿ ತಣ್ಣಗೆ ಹಿಮಾಲಯದಂತೆ ತೋರಿದರು.
ತಮ್ಮ ಹುಡುಗರು ವಿಶ್ವಕಪ್ ಗೆದ್ದ ಖುಷಿಯನ್ನು ಕುಣಿದು ಕುಪ್ಪಳಿಸಿ ಅನುಭವಿಸುತ್ತಿದ್ದರೂ ದ್ರಾವಿಡ್ ಮುಖದಲ್ಲಿ ಕೊಂಚವೂ ಬದಲಾವಣೆಯಿಲ್ಲ. ಎಂದಿನಂತೆ ಅದೇ ಶಾಂತತೆ, ನಿರ್ಲಿಪ್ತ ಭಾವದಲ್ಲಿ ಮೈದಾನಕ್ಕೆ ನಡೆದು ಬಂದು ಆಟಗಾರರನ್ನು ಅಭಿನಂದಿಸಿದರು!
ನಂತರ ಸಂದರ್ಶಕರು ಮೈಕ್ ಹಿಡಿದು ಬಂದಾಗಲೂ ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾ ಈ ಯಶಸ್ಸಿನ ಕ್ರೆಡಿಟ್ ಹುಡುಗರಿಗೇ ಸೇರುತ್ತದೆ, ಅವರ ಪರಿಶ್ರಮದ ಫಲವಿದು, ನನ್ನದೇನಿಲ್ಲ. ನಮ್ಮ ಬಳಿ ಅತ್ಯುತ್ತಮ ಸಹಾಯಕ ಸಿಬ್ಬಂದಿಗಳಿದ್ದರು. ನಾವು ಈ ಹುಡುಗರಿಗೆ ನಮಗೆ ಗೊತ್ತಿರುವುದನ್ನೆಲ್ಲಾ ಹೇಳಿಕೊಟ್ಟೆವು. ನಾನು ಕೋಚ್ ಆಗಿದ್ದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತು. ಆದರೆ ಇದೆಲ್ಲಾ ಹುಡುಗರ ಪರಿಶ್ರಮದ ಫಲವಷ್ಟೇ ಎಂದು ದ್ರಾವಿಡ್ ಎಂದಿನ ವಿಧೇಯತೆಯಿಂದಲೇ ಹೇಳಿಕೊಂಡರು. ಇದೇ ಕಾರಣಕ್ಕೆ ದ್ರಾವಿಡ್ ನಮಗೆಲ್ಲರಿಗೂ ಇಷ್ಟವಾಗುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ