ಬೇ ಓವಲ್: ರಾಹುಲ್ ದ್ರಾವಿಡ್ ತಾವು ಟೀಂ ಇಂಡಿಯಾಗಾಗಿ ಆಡುವಾಗ ವಿಶ್ವಕಪ್ ಗೆಲ್ಲುವ ತಂಡದ ಭಾಗವಾಗಲು ಸಾಧ್ಯವಾಗಲಿಲ್ಲ. ಅವರ ನಾಯಕತ್ವದಲ್ಲಿ ಆಡಿದ ವಿಶ್ವಕಪ್ ನಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಆದರೆ ದ್ರಾವಿಡ್ ಗೆ ಆ ಕನಸು ಮತ್ತೆ ನನಸು ಮಾಡಿಕೊಳ್ಳುವ ಅವಕಾಶ ಬಂದಿದೆ.
ಭಾರತ ಅಂಡರ್ 19 ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ಹುಡುಗರು ಇಂದು ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಹಗಲು-ರಾತ್ರಿ ನಡೆಯಲಿರುವ ಈ ಪಂದ್ಯದಲ್ಲಿ ದ್ರಾವಿಡ್ ಹುಡುಗರು ಆಸ್ಟ್ರೇಲಿಯಾವನ್ನು ಎದುರಿಸುತ್ತಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ 26 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.
ದ್ರಾವಿಡ್ ತಾವೇ ಸ್ವತಃ ಕಣಕ್ಕಿಳಿಯದಿದ್ದರೂ ಕೋಚ್ ಆಗಿ ಹುಡುಗರನ್ನು ಹುರಿದುಂಬಿಸಿ ಕಣಕ್ಕಿಳಿಸುತ್ತಿದ್ದಾರೆ. ಇದುವರೆಗೆ ಭಾರತ ತಂಡ ನಾಲ್ಕು ಬಾರಿ ಅಂಡರ್ 19 ವಿಶ್ವ ಚಾಂಪಿಯನ್ ಆಗಿದೆ. ಇಂದು ಗೆದ್ದರೆ ನಾಲ್ಕನೇ ಬಾರಿ ಆ ಸಾಧನೆ ಮಾಡಲಿದೆ. ಇದು ವಿಶ್ವ ದಾಖಲೆಯಾಗಲಿದೆ. ಜತೆಗೆ ಕೋಚ್ ಆಗಿ ದ್ರಾವಿಡ್ ಗರಿಮೆಗೆ ಇನ್ನೊಂದು ಗರಿ ಸೇರ್ಪಡೆಯಾಗಲಿದೆ. ಆಟಗಾರನಾಗಿ ಸಾಧಿಸಲಾಗದ್ದನ್ನು ಕೋಚ್ ಆಗಿ ತೀರಿಸಿದ ಹೆಮ್ಮೆ ಅವರಿಗಾಗಲಿದೆ. ಆಲ್ ದಿ ಬೆಸ್ಟ್ ಬಾಯ್ಸ್..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ