Publish Date: Sun, 14 Jun 2020 (09:08 IST)
Updated Date: Sun, 14 Jun 2020 (09:10 IST)
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮಗೆ ಕೊರೋನಾ ವೈರಸ್ ತಗುಲಿರುವುದಾಗಿ ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೇ ಟ್ವಿಟರಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಭಾರತ ವಿರೋಧಿ ಹೇಳಿಕೆಗಳಿಂದ ಅಫ್ರಿದಿ ಸುದ್ದಿಯಾಗಿದ್ದರು. ಹೀಗಾಗಿ ಭಾರತೀಯರು ಕೆಲವರು ಶಾಹಿದ್ ಅಫ್ರಿದಿಗೆ ಕೊರೋನಾ ತಗುಲಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಅವರಿಗೆ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
ಕೊರೋನಾದಿಂದ ಸಂಕಷ್ಟಕ್ಕೀಡಾದವರಿಗೆ ತಮ್ಮ ಚ್ಯಾರಿಟಿ ಸಂಸ್ಥೆ ಮೂಲಕ ಖುದ್ದಾಗಿ ಜನರ ಬಳಿ ತೆರಳಿ ಅಫ್ರಿದಿ ಅಗತ್ಯ ವಸ್ತುಗಳನ್ನು ಹಂಚುವ ಕೆಲಸ ಮಾಡುತ್ತಿದ್ದರು. ಅವರು ಜನ ಸಂಪಕರ್ದಲ್ಲಿದ್ದರಿಂದ ಅವರಿಗೆ ಕೊರೋನಾ ತಗುಲಿರಬಹುದು ಎನ್ನಲಾಗಿದೆ.