Select Your Language

Notifications

webdunia
webdunia
webdunia
webdunia

ಮತ್ತೆ ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ: ಮೈದಾನಕ್ಕೆ ಬಂದ ಪೊಲೀಸರು

ಮೊಹಮ್ಮದ್ ಸಿರಾಜ್
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಇದೀಗ ಕೆಲವು ಕಾಲ ಸ್ಥಗಿತಗೊಂಡಿದೆ. ಕಾರಣ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ವಿರುದ್ಧ ಇಂದೂ ಕೆಲವು ಕಿಡಿಗೇಡಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ.


ಪಂದ್ಯ ವೀಕ್ಷಿಸುತ್ತಿರುವ ಆಸ್ಟ್ರೇಲಿಯಾ ಅಭಿಮಾನಿಗಳ ಗುಂಪೊಂದು ಇಂದೂ ಜನಾಂಗೀಯ ನಿಂದನೆ ಮುಂದುವರಿಸಿದೆ. ಇದರ ಬಗ್ಗೆ ನಾಯಕ ಅಜಿಂಕ್ಯಾ ರೆಹಾನೆ ಮತ್ತು ಸಿರಾಜ್ ಅಂಪಾಯರ್ ಗಳಿಗೆ ದೂರು ನೀಡಿದ್ದಾರೆ. ಮೈದಾನಕ್ಕೆ ಪೊಲೀಸ್ ಸಿಬ್ಬಂದಿಗಳೂ ಆಗಮಿಸಿದ್ದಾರೆ. ಸ್ವತಃ ಸಿರಾಜ್ ಬೌಂಡರಿ ಗೆರೆ ಬಳಿ ತೆರಳಿ ಅಂಪಾಯರ್ ಗಳು ಮತ್ತು ಪೊಲೀಸರಿಗೆ ತನ್ನನ್ನು ನಿಂದಿಸಿದ ಗುಂಪನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಪೊಲೀಸರು ಈ ಗುಂಪನ್ನು ಮೈದಾನ ಬಿಟ್ಟು ತೆರಳುವಂತೆ ಸೂಚಿಸಿದ್ದಾರೆ. ಬಳಿಕ ಪಂದ್ಯ ಪುನರಾರಂಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಟೆಸ್ಟ್ ಗೆಲುವು ಟೀಂ ಇಂಡಿಯಾಗಿನ್ನು ಕನಸು