Publish Date: Sat, 09 Jan 2021 (16:54 IST)
Updated Date: Sat, 09 Jan 2021 (16:56 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿ ಕೆಲವು ಮದ್ಯಪಾನ ಮಾಡಿದ ಆಸೀಸ್ ಪ್ರೇಕ್ಷಕರು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾರೆ.
ಇದನ್ನು ಸಿರಾಜ್ ಅಂಪಾಯರ್ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಪ್ರಕರಣದ ಬಗ್ಗೆ ಅಧಿಕೃತವಾಗಿ ದೂರು ನೀಡಿದೆ. ಪಾನಮತ್ತ ಪ್ರೇಕ್ಷಕರು ಸತತವಾಗಿ ಸಿರಾಜ್ ಮೇಲೆ ತೀರಾ ಅವಹೇಳನಕಾರಿಯಾಗಿ ಜನಾಂಗೀಯ ನಿಂದನೆ ಮಾಡುತ್ತಿದ್ದರು. ಇದು ಅವರಿಗೆ ನೋವುಂಟುಮಾಡಿತ್ತು. ಈ ವಿಚಾರವನ್ನು ನಾಯಕ ರೆಹಾನೆ ಮತ್ತು ಸಿರಾಜ್ ತಕ್ಷಣವೇ ಆನ್ ಫೀಲ್ಡ್ ಪ್ರೇಕ್ಷಕರ ಗಮನಕ್ಕೆ ತಂದರು ಎನ್ನಲಾಗಿದೆ.