Publish Date: Tue, 02 Jun 2020 (09:22 IST)
Updated Date: Tue, 02 Jun 2020 (09:24 IST)
ದುಬೈ: ಕೊರೋನಾ ಹರಡದಂತೆ ತಡೆಯಲು ಐಸಿಸಿ ಇತ್ತೀಚೆಗೆ ಬೌಲರ್ ಗಳು ಪಂದ್ಯದ ಸಮಯದಲ್ಲಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ರಸ ಬಳಸುವುದಕ್ಕೆ ನಿಷೇಧ ಹೇರಿತ್ತು.
ಆದರೆ ಇದು ವೇಗಿಗಳಿಗೆ ಸಂಕಷ್ಟ ತಂದಿದೆ. ಜೊಲ್ಲು ರಸ ಬಳಸಿ ಚೆಂಡು ಹೊಳಪು ಮೂಡಿಸುವುದು ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಅಲ್ಲದೆ, ಇದು ಪರಿಣಾಮಕಾರಿ ಕೂಡಾ. ಆದರೆ ಐಸಿಸಿ ಇದಕ್ಕೆ ನಿಷೇಧ ಹೇರಿರುವುದು ಬೌಲರ್ ಗಳಿಗೆ ಪರ್ಯಾಯ ಮಾರ್ಗ ಇಲ್ಲದಂತಾಗಿದೆ.
ಹೀಗಾಗಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಜೊಲ್ಲು ರಸ ಬಳಕೆ ಬದಲು ಚೆಂಡು ಹೊಳಪು ಮೂಡಿಸಲು ಪರ್ಯಾಯ ವಸ್ತು ಏನಾದರೂ ಸೂಚಿಸಿ ಎಂದು ಐಸಿಸಿಗೆ ಮನವಿ ಮಾಡಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.