Publish Date: Mon, 16 Nov 2020 (10:57 IST)
Updated Date: Mon, 16 Nov 2020 (10:58 IST)
ಸಿಡ್ನಿ: ಹಲವು ತಿಂಗಳುಗಳ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ಸರಣಿ ಆಡಲಿಳಿಯುತ್ತಿದ್ದು, ದೇಶಕ್ಕಾಗಿ ಕ್ರಿಕೆಟ್ ಆಡುವುದೇ ಹೆಮ್ಮೆಯ ವಿಚಾರ ಎಂದು ವೇಗಿ ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಐಪಿಎಲ್ ನಲ್ಲಿ ಶಮಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡಿದ್ದರು. ಆದರೆ ಟೀಂ ಇಂಡಿಯಾ ಪ್ರತಿಧಿಸುವ ಖುಷಿಯೇ ಬೇರೆ ಎಂದಿದ್ದಾರೆ. ದೇಶಕ್ಕಾಗಿ ಆಡುವುದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. ಟೀಂ ಇಂಡಿಯಾ ನೆಟ್ ನಲ್ಲಿ ಆಡುವ ಬಹಳ ದಿನಗಳ ಕಾಯುವಿಕೆ ಇಂದಿಗೆ ಕೊನೆಯಾಗಿದೆ. ಆಸ್ಟ್ರೇಲಿಯಾ ಸರಣಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಶಮಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.