ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದು ಮೂರನೇ ಏಕದಿನ ಪಂದ್ಯವಾಡಲಿದೆ. ಇದೇ ಸಂದರ್ಭದಲ್ಲಿ ನಾಯಕ ಕೊಹ್ಲಿ ಗಮನ ಈ ಮೂರು ದಾಖಲೆಗಳನ್ನು ಮುರಿಯುವುದರತ್ತ ಇರಲಿದೆ.
ದಾಖಲೆ ನಂ.1
ವಿರಾಟ್ ಕೊಹ್ಲಿ ತಮ್ಮ 191 ಏಕದಿನ ಪಂದ್ಯಗಳಲ್ಲಿ ಇದುವರೆಗೆ 8,343 ರನ್ ಗಳಿಸಿದ್ದಾರೆ. ಆದರೆ ಯಾವ ತಂಡದ ವಿರುದ್ಧವೂ 2000 ರನ್ ಪೂರೈಸಿರಲಿಲ್ಲ. ಇದೀಗ ಈ ಪಂದ್ಯದಲ್ಲಿ 58 ರನ್ ಗಳಿಸಿದರೆ ಕೊಹ್ಲಿ ಆ ದಾಖಲೆ ಮಾಡಲಿದ್ದಾರೆ.
ದಾಖಲೆ ನಂ.2
ಕೊಹ್ಲಿ ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 777 ಬೌಂಡರಿ ಹೊಡೆದಿದ್ದಾರೆ. ಇನ್ನು 23 ಬೌಂಡರಿ ಗಳಿಸಿದರೆ 1000 ಬೌಂಡರಿ ಗಳಿಸಿದ ವಿಶ್ವದ 19 ನೇ ಆಟಗಾರ ಎನಿಸಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಇದು ಕಷ್ಟವೆನಿಸಬಹುದು.
ದಾಖಲೆ ನಂ.3
2017 ನೇ ಕ್ಯಾಲೆಂಡರ್ ವರ್ಷದ ಅತ್ಯಧಿಕ ರನ್ ಗಳಿಕೆ ಮಾಡಿದ ಕ್ರಿಕೆಟಿಗರ ಪೈಕಿ ಸದ್ಯಕ್ಕೆ ಕೊಹ್ಲಿಗೆ ಮೂರನೇ ಸ್ಥಾನ. ಈ ಪಂದ್ಯದಲ್ಲಿ 42 ರನ್ ಗಳಿಸಿದರೆ ದ. ಆಫ್ರಿಕಾದ ಫಾ ಡು ಪ್ಲೆಸಿಸ್ ಗಳಿಸಿದ 814 ರನ್ ಗಳ ದಾಖಲೆಯನ್ನು ಹಿಂದಿಕ್ಕಿ ನಂ.1 ಆಗಲಿದ್ದಾರೆ.