ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಾವು ಒಲಿಂಪಿಕ್ಸ್ ಗೆ ಹೋಗಿದ್ದೇ ತಪ್ಪಾಯ್ತು ಎಂದಿದ್ದಾರೆ. ಅವರು ಹೀಗೇಕೆ ಹೇಳಿದರು?
ವರ್ಲ್ಡ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಹಂತ ತಲುಪಿರುವ ಸೈನಾ ನೆಹ್ವಾಲ್ ಒಂದು ವರ್ಷದ ಹಿಂದೆ ರಿಯೋ ಒಲಿಂಪಿಕ್ಸ್ ಸೋಲನ್ನು ನೆನಪಿಸಿಕೊಂಡಿದ್ದಾರೆ.
‘ಆಗ ಏನಾಗಿತ್ತು ಎಂದು ನನಗೆ ಮಾತ್ರ ಗೊತ್ತು. ನಾನು ರಿಯೋಗೆ ಹೋಗಲೇ ಬಾರದಿತ್ತು. ನನಗೆ ಆಗ ಅಷ್ಟು ದೊಡ್ಡ ಗಾಯವಿದೆ ಎಂದು ಗೊತ್ತೇ ಇರಲಿಲ್ಲ. ಆದರೆ ನನ್ನ ಕೋಚ್ ಮತ್ತು ಹೆತ್ತವರ ನಂಬಿಕೆಯೇ ನನ್ನನ್ನು ಕಾಪಾಡಿತು. ಈಗಲೂ ಆಡುವಾಗ ಮೊಣಕಾಲಿನಲ್ಲಿ ಕೆಲವೊಮ್ಮೆ ಸೆಳೆತ ಕಾಣಿಸಿಕೊಳ್ಳುತ್ತದೆ’ ಎಂದು ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸೈನಾ ನೆಹ್ವಾಲ್ ಹೇಳಿದ್ದಾರೆ.