Publish Date: Sat, 27 Mar 2021 (09:36 IST)
Updated Date: Sat, 27 Mar 2021 (09:39 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ ಟೀಕಾಕಾರರಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ.
ಟಿ20 ಸರಣಿಯಲ್ಲಿ ಸತತ ವೈಫಲ್ಯದಿಂದಾಗಿ ರಾಹುಲ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಸಂಭ್ರಮಿಸುವಾಗ ಕಿವಿ ಮುಚ್ಚಿ ಕೆಲ ಕ್ಷಣ ಕಾಲ ನಿಂತರು.
ಇದರ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ಕೆಎಲ್ ರಾಹುಲ್, ಕೆಲವರು ನಿಮ್ಮನ್ನು ಕೆಳಗಿಳಿಯಲೆಂದೇ ಕಾಯುತ್ತಿರುತ್ತಾರೆ. ನಿರಂತರ ಟೀಕೆ ಮಾಡುತ್ತಾರೆ. ನಾನಿಲ್ಲಿ ಯಾರನ್ನೂ ಅಗೌರವಿಸಲು ಬಯಸುವುದಿಲ್ಲ. ಅಂತಹ ಟೀಕಾಕಾರರ ಗದ್ದಲವನ್ನು ಕೇಳಲೂ ಇಷ್ಟಪಡುವುದಿಲ್ಲ. ಈ ಗದ್ದಲಗಳಿಗೆ ಕಿವಿ ಮುಚ್ಚಿಕೊಂಡು ಬ್ಯಾಟಿನಿಂದಲೇ ಉತ್ತರಿಸುತ್ತೇನೆ ಎನ್ನುವುದೇ ನನ್ನ ಸಂದೇಶ ಹೇಳಿದ್ದಾರೆ.