ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಇಂಗ್ಲೆಂಡ್ 6 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಮತ್ತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೆಎಲ್ ರಾಹುಲ್ ಶತಕ (108), ವಿರಾಟ್ ಕೊಹ್ಲಿ (66), ರಿಷಬ್ ಪಂತ್ (77) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಇಂಗ್ಲೆಂಡ್ ಸಲೀಸಾಗಿಯೇ ಬೆನ್ನತ್ತಿತ್ತು.
ಆರಂಭದ ವಿಕೆಟ್ ಗೆ ಜಾನಿ ಬೇರ್ ಸ್ಟೋ-ಜೇಸನ್ ರಾಯ್ 110 ರನ್ ಪೇರಿಸಿದರು. ಬೇರ್ ಸ್ಟೋ ಭರ್ಜರಿ ಶತಕ (124) ದಾಖಲಿಸಿದರೆ ರಾಯ್ 55 ರನ್ ಗಳ ಕೊಡುಗೆ ನೀಡಿದರು. ಬಳಿಕ ಬಂದ ಬೆನ್ ಸ್ಟೋಕ್ಸ್ ಕೇವಲ 52 ಎಸೆತಗಳಲ್ಲಿ 10 ಸಿಕ್ಸರ್ ಸಹಿತ 99 ರನ್ ಗಳಿಸಿ ಔಟಾದರು. ಇವರ ಕೊಡುಗೆಯಿಂದಾಗಿ ಇಂಗ್ಲೆಂಡ್ 43.3 ಓವರ್ ಗಳಲ್ಲೇ 4 ವಿಕೆಟ್ ಕಳೆದುಕೊಂಡು 337 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿತು. ಈ ಸರಣಿಯಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದು ಮತ್ತೆ ಸಾಬೀತಾಯಿತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಗೆದ್ದವರು ಸರಣಿ ಗೆಲ್ಲಲಿದ್ದಾರೆ.