ಪಲ್ಲಿಕೆಲೆ: ಸಚಿನ್ ತೆಂಡುಲ್ಕರ್ ತಂದೆಯ ಸಾವಿನ ನಂತರ ಎರಡೇ ದಿನದಲ್ಲಿ ಕ್ರಿಕೆಟ್ ಕಣಕ್ಕೆ ಮರಳಿದ ಘಟನೆಯನ್ನು ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಆದರೆ ಲಂಕಾ ತಂಡದಲ್ಲಿ ನಿನ್ನೆ ಮದುವೆಯಾದ ಕ್ರಿಕೆಟಿಗ ಇಂದು ಮೈದಾನಕ್ಕಿಳಿದಿದ್ದಾರೆ.
ಶ್ರೀಲಂಕಾ ತಂಡದ ಆಲ್ ರೌಂಡರ್ 25 ವರ್ಷದ ಅಖಿಲಾ ಧನಂಜಯ್ ಈ ಆಟಗಾರ. ಭಾರತದ ವಿರುದ್ಧದ ಇಂದಿನ ಪಂದ್ಯಕ್ಕೆ ಅವಕಾಶ ಪಡೆದುಕೊಂಡಿರುವ ಅವರು ನಿನ್ನೆಯಷ್ಟೇ ವಿವಾಹವಾಗಿದ್ದಾರೆ.
ನೂತನ ಮದುಮಗ ಸೀದಾ ಕ್ರಿಕೆಟ್ ಫೀಲ್ಡ್ ನಲ್ಲಿ ಕಮಾಲ್ ಮಾಡಲು ಹೊರಟಿದ್ದಾರೆ. ಇದು ಅವರಿಗೆ ಕೇವಲ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ. ಮದುವೆಯ ಅದೃಷ್ಟ ಅವರ ಕೈ ಹಿಡಿಯುತ್ತಾ ಎಂದು ಕಾದು ನೋಡಬೇಕು.