ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸಮವಸ್ತ್ರ ಒದಗಿಸುತ್ತಿರುವ ನೈಕ್ ಸಂಸ್ಥೆಯ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಸಿಟ್ಟಿಗೆದ್ದಿದ್ದಾರೆ.
ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಜೆರ್ಸಿ. ಭಾರತ ತಂಡಕ್ಕೆ ದ್ವಿತೀಯ ದರ್ಜೆಯ ಸಮವಸ್ತ್ರ ಕಳುಹಿಸಿದ್ದಕ್ಕೆ ಕೊಹ್ಲಿ ಮತ್ತು ಬಿಸಿಸಿಐ ಗರಂ ಆಗಿದ್ದಾರೆ.
ಖ್ಯಾತ ಕ್ರೀಡಾ ಪರಿಕರ ಸಂಸ್ಥೆಯಾದ ನೈಕ್ ಜತೆ ಬಿಸಿಸಿಐ 2006 ರಿಂದ ಒಪ್ಪಂದ ಮಾಡಿಕೊಂಡಿತ್ತು. ಕಳೆದ ವರ್ಷ 370 ಕೋಟಿ ರೂ. ಗಳಿಗೆ ಒಪ್ಪಂದ ನವೀಕರಿಸಲಾಗಿತ್ತು. ಹಾಗಿದ್ದೂ ಕಳಪೆ ಗುಣಮಟ್ಟದ ಸಮವಸ್ತ್ರ ಒದಗಿಸಿದ್ದಕ್ಕೆ ಬಿಸಿಸಿಐ ಸಿಟ್ಟಿಗೆದ್ದಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಜತೆ ಸಭೆ ನಡೆಸಲಿದೆ.