Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ಇಂದು ದಾಖಲೆಯ ಪಂದ್ಯವಾಡುತ್ತಿರುವ ಶ್ರೀಲಂಕಾ ತಂಡಕ್ಕೆ ಮೊದಲ ಹೆಜ್ಜೆಯಲ್ಲೇ ಸೋಲಾಗಿದೆ.
ಟೀಂ ಇಂಡಿಯಾ ಟಾಸ್ ಗೆದ್ದಿದ್ದು, ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದೆ. 800 ನೇ ಏಕದಿನ ಪಂದ್ಯವಾಡುತ್ತಿರುವ ಲಂಕಾಗೆ ಇದು ಸ್ಮರಣೀಯ ಪಂದ್ಯ. ಆದರೆ ಟಾಸ್ ಗೆಲ್ಲುವಲ್ಲಿ ವಿಫಲವಾಗಿದೆ.
ಭಾರತ ತಂಡ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಮೊದಲ ಪಂದ್ಯವಾಡಿದ ಆಟಗಾರರೇ ಇಂದೂ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅತ್ತ ಲಂಕಾದಲ್ಲಿ ದುಷ್ಮಂತಾ, ಅಖಿಲ ಧನಂಜಯ ಮತ್ತು ಮಿಲಿಂದ ಸಿರಿವರ್ಧನ ಕಣಕ್ಕಿಳಿಯುತ್ತಿದ್ದಾರೆ.