Publish Date: Thu, 24 Dec 2020 (08:55 IST)
Updated Date: Thu, 24 Dec 2020 (08:56 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉಳಿದ ಟೆಸ್ಟ್ ಪಂದ್ಯಗಳಿಗೆ ಹಂಗಾಮಿ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಲಿರುವ ಅಜಿಂಕ್ಯಾ ರೆಹಾನೆಯನ್ನು ವೇಗಿ ಇಶಾಂತ್ ಶರ್ಮಾ ಹಾಡಿ ಹೊಗಳಿದ್ದಾರೆ.
ರೆಹಾನೆ ಬೌಲರ್ ಗಳ ನಾಯಕ ಎಂದು ಅವರು ಕೊಂಡಾಡಿದ್ದಾರೆ. ಅವರು ಶಾಂತ ಸ್ವಭಾವದವರು, ಒತ್ತಡ ಮೈಮೇಲೆಳೆದುಕೊಳ್ಳದೇ ತಂಡವನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದು ಇಶಾಂತ್ ಹೊಗಳಿದ್ದಾರೆ. ರೆಹಾನೆ ಶಾಂತ ಸ್ವಭಾವದವರಾಗಿರಬಹುದು ಆದರೆ ಅವರಲ್ಲಿ ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ ಎಂದು ಸಂದರ್ಶನವೊಂದರಲ್ಲಿ ಇಶಾಂತ್ ಹೇಳಿದ್ದಾರೆ.