ಕೇಪ್ ಟೌನ್: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಮೊದಲ ಪಂದ್ಯಕ್ಕೇ ಶಿಖರ್ ಧವನ್ ಪಾದದ ಗಾಯಕ್ಕೆ ತುತ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದರಿಂದಾಗಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸ್ಥಾನ ಗಟ್ಟಿಯಾಗಿತ್ತು.
ಆದರೆ ಇದೀಗ ಕೆಎಲ್ ರಾಹುಲ್ ಆಸೆಯ ಬಲೂನ್ ಟುಸ್ ಎಂದಿದೆ. ಇದಕ್ಕೆ ಕಾರಣ ಶಿಖರ್ ಧವನ್ ಫಿಟ್ ಎಂದು ಬಿಸಿಸಿಐ ಘೋಷಿಸಿರುವುದು. ತನ್ನ ಟ್ವಿಟರ್ ಪೇಜ್ ನಲ್ಲಿ ಶಿಖರ್ ಧವನ್ ಗಾಯದಿಂದ ಚೇತರಿಸಿದ್ದು, ಮೊದಲ ಟೆಸ್ಟ್ ಗೆ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಘೋಷಿಸಿದೆ.
ಇದರಿಂದಾಗಿ ಮತ್ತೆ ಕೆಲ್ ರಾಹುಲ್, ಧವನ್ ಮತ್ತು ಮುರಳಿ ವಿಜಯ್ ನಡುವೆ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ಏರ್ಪಡಲಿದೆ. ಕೊಹ್ಲಿ ಒಲವು ಹೆಚ್ಚಾಗಿ ಧವನ್ ಕಡೆಗೇ ಇರುತ್ತದೆ. ಇನ್ನು ಅನುಭವಿ ಆಟಗಾರ ಮುರಳಿ ವಿಜಯ್ ರನ್ನು ದ.ಆಫ್ರಿಕಾದ ಹಸಿರು ಪಿಚ್ ನಲ್ಲಿ ಕೈ ಬಿಡುವ ಪ್ರಶ್ನೆಯೇ ಇರದು. ಹೀಗಾಗಿ ರಾಹುಲ್ ಸ್ಥಾನ ಬಿಡಬೇಕಾಗಿ ಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ