ಕೇಪ್ ಟೌನ್: ಟೆಸ್ಟ್ ಸರಣಿ ಆಡಲು ದ.ಆಫ್ರಿಕಾಗೆ ತೆರಳಿರುವ ಟೀಂ ಇಂಡಿಯಾ ತೀವ್ರ
ಅಸಮಾಧಾನಗೊಂಡಿದೆ. ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿಯ ಧೋರಣೆಗೆ ತೀರಾ ಸಿಟ್ಟಿಗೆದ್ದಿದೆ.
ಟೆಸ್ಟ್ ಸರಣಿಗೆ ಮೊದಲು ಭಾರತ ತಂಡಕ್ಕೆ ಅಭ್ಯಾಸ ನಡೆಸಲು ತೀರಾ ಕಳಪೆ ಗುಣಮಟ್ಟದ ಟ್ರ್ಯಾಕ್ ನೀಡಿರುವುದಕ್ಕೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅಸಮಾಧಾನಗೊಂಡಿದ್ದಾರೆ. ಸ್ವತಃ ಬಿಸಿಸಿಐ ಫಾಸ್ಟ್ ಟ್ರ್ಯಾಕ್ ನೀಡುವಂತೆ ಬೇಡಿಕೆಯಿಟ್ಟಿದ್ದರೂ ತಡವಾಗಿ ಬೇಡಿಕೆಯಿಟ್ಟಿದೆ ಎಂದು ನೆಪವೊಡ್ಡಿ ಆಫ್ರಿಕಾ ಮಂಡಳಿ ಕೊಂಚವೂ ವೇಗಕ್ಕೆ ಸಹಕರಿಸದ ಪಿಚ್ ನಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ.
ಅಷ್ಟೇ ಅಲ್ಲದೆ, ಅಭ್ಯಾಸದ ಮೊದಲ ದಿನವೇ ಮಳೆಯಿಂದಾಗಿ ಒಳಾಂಗಣದಲ್ಲಿ ಅಭ್ಯಾಸ ನಡೆಸಬೇಕಾಗಿ ಬಂದಿದೆ. ಇದರಿಂದ ಅಭ್ಯಾಸಕ್ಕೆ ತೊಡಕಾಗಿದೆ. ಇದು ಕೊಹ್ಲಿ ಪಡೆ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ವೇಗದ ಪಿಚ್ ನೀಡದೇ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ವೇಗದ ಪಿಚ್ ನೀಡಿ ಟೀಂ ಇಂಡಿಯಾವನ್ನು ಹಣಿಯುವುದು ಆಫ್ರಿಕಾ ತಂತ್ರಗಾರಿಕೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ