ಕೊಲಂಬೊ : ಶ್ರೀಲಂಕಾ ತಂಡದ ಕ್ರಿಕೆಟ್ ಮಾಜಿ ಆಟಗಾರರಾದ ಆಲ್ ರೌಂಡರ ಸನತ್ ಜಯಸೂರ್ಯ ಅವರು ಈಗ ನಡೆದಾಡಲು ಸಾಧ್ಯವಾಗದೆ ಊರುಗೋಲನ್ನು ಬಳಸುತ್ತಿದ್ದಾರೆ.
ಹಿಂದೆ ತಮ್ಮ ಮಿಂಚಿನ ಬ್ಯಾಟಿಂಗ್ ಹಾಗು ಬೌಲಿಂಗ್ ಮೂಲಕ ವಿಶ್ವದ ಆಟಗಾರರ ನಿದ್ದೆಗೆಡಿಸುತ್ತಿದ್ದ ಇವರನ್ನು ಈಗ ನೋಡಿದರೆ ಎಂತವರ ಮನ ಹಿಂಡಿದಂತಾಗುತ್ತದೆ. ಅವರು ಮಂಡಿನೋವಿನಿಂದ ಬಳಲುತ್ತಿದ್ದು, ಊರುಗೋಲಿನ ಮೂಲಕವೇ ನಡೆದಾಡುವಂತಹ ಪರಿಸ್ಥಿಗೆ ತಲುಪಿದ್ದಾರೆ. 48 ವಯಸ್ಸಿನ ಜಯಸೂರ್ಯ ಅವರಿಗೆ ನಿವೃತ್ತಿ ಜೀವನ ಈಗ ಕಷ್ಟಕರವಾಗಿದೆ. ಇವರು ಕೆಲವು ಸಮಯದಿಂದ ಮಂಡಿನೋವಿನಿಂದ ನರಳುತ್ತಿದ್ದು, ವಿಶೇಷ ಶಸ್ತ್ರಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಗೆ ತೆರಳಿದ್ದಾರೆ.
ಇವರು 1996ರಲ್ಲಿ ಶ್ರೀಲಂಕಾ ತಂಡಕ್ಕೆ ಮೊದಲ ವಿಶ್ವಕಪ್ ಗೆಲ್ಲಲು ಮುಖ್ಯ ಪಾತ್ರ ವಹಿಸಿದ್ದರು. 1999ರಿಂದ 2003 ತನಕ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿದ್ದರು. 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ