Publish Date: Tue, 31 Mar 2020 (09:36 IST)
Updated Date: Tue, 31 Mar 2020 (09:38 IST)
ಮುಂಬೈ: ಕೊರೋನಾದಿಂದಾಗಿ ದೇಶ ಕಂಗೆಟ್ಟಿರುವುದರಿಂದ ಸಿನಿಮಾ ಸ್ಟಾರ್ ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿಗಳಿಗೆ ನೆರವು ನೀಡುತ್ತಿರುವ ಸುದ್ದಿ ಬರುತ್ತಲೇ ಇದೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗರಿಂದ ಹೇಳಿಕೊಳ್ಳುವಂತಹ ಕೊಡುಗೆ ಬಂದಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿತ್ತು.
ಕೊನೆಗೂ ಇದೀಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದಕ್ಕೂ ಮೊದಲು ಶಿಖರ್ ಧವನ್ ಮೊದಲನೆಯವರಾಗಿ ದೇಣಿಗೆ ನೀಡಿದ್ದರು.
ಇದೀಗ ಕೊರೋನಾ ಪರಿಹಾರಕ್ಕೆ ದೇಣಿಗೆ ನೀಡುತ್ತಿರುವುದಾಗಿ ಕೊಹ್ಲಿ ದಂಪತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಮೂಲಗಳ ಪ್ರಕಾರ ಕೊಹ್ಲಿ ದಂಪತಿ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.