Publish Date: Sat, 28 Mar 2020 (09:19 IST)
Updated Date: Sat, 28 Mar 2020 (09:21 IST)
ಮುಂಬೈ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಿಕೆಟಿಗರು ಈಗಾಗಲೇ ತಮ್ಮ ದೇಶದಲ್ಲಿ ಕೊರೋನಾ ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಿದ್ದಾರೆ. ಆದರೆ ಭಾರತೀಯ ಕ್ರಿಕೆಟಿಗರಿಂದ ಇಂತಹ ಕೊಡುಗೆ ಬಂದಿರಲಿಲ್ಲ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪಾಕಿಸ್ತಾನ, ಬಾಂಗ್ಲಾ ಕ್ರಿಕೆಟಿಗರಂತೆ ನಮ್ಮ ಕ್ರಿಕೆಟಿಗರಿಂದ ಯಾವುದೇ ಸುದ್ದಿ ಬಂದಿಲ್ಲ ಎಂದು ಟ್ವಿಟರ್ ಗಳಲ್ಲಿ ಪ್ರಶ್ನಿಸಿದ್ದರು.
ಇದೀಗ ಈ ಟೀಕೆಗಳಿಗೆ ಉತ್ತರವೆಂಬಂತೆ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಕೈಲಾದಷ್ಟು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆದರೆ ವಿಶ್ವದ ಶ್ರೀಮಂತ ಕ್ರೀಡಾಳು ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದ ಘಟಾನುಘಟಿ ಕ್ರಿಕೆಟಿಗರಿಂದ ಇನ್ನೂ ಅಂತಹ ಯಾವುದೇ ಸುದ್ದಿ ಬಂದಿಲ್ಲ.