Publish Date: Mon, 04 May 2020 (09:08 IST)
Updated Date: Mon, 04 May 2020 (09:09 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಧೋನಿಯಂತೆ ಶ್ವಾನ ಪ್ರಿಯ. ಧೋನಿಯಷ್ಟಲ್ಲದಿದ್ದರೂ ತಮ್ಮ ನೆಚ್ಚಿನ ನಾಯಿಗಳ ಜತೆಗಿರುವ ಫೋಟೋವನ್ನು ಕೊಹ್ಲಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಾರೆ.
ಅಷ್ಟಕ್ಕೂ ಕೊಹ್ಲಿ ಬಳಿ ಯಾವ ಬಗೆಯ ನಾಯಿಯಿದೆ? ಅವರ ಮೆಚ್ಚುನ ನಾಯಿ ಯಾವುದು ಗೊತ್ತಾ? ಕೊಹ್ಲಿ ಆರಂಭದಲ್ಲಿ ಪಮೋರಿಯನ್ ನಾಯಿಯನ್ನು ಸಾಕಿದ್ದರು. ಇದು ಅವರ ಮೆಚ್ಚಿನ ನಾಯಿಯಾಗಿತ್ತು ಕೂಡಾ. ಇದಾದ ಬಳಿಕ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯೊಂದನ್ನು ಸಲಹುತ್ತಿದ್ದರು.
ಸದ್ಯಕ್ಕೆ ಅವರ ಬಳಿಯಿರುವುದು ಬೀಗಲ್ ತಳಿಯ ಬ್ರೂನೋ ಹೆಸರಿನ ನಾಯಿ. ಈ ನಾಯಿಯೆಂದರೆ ಕೊಹ್ಲಿಗೆ ಅಚ್ಚುಮೆಚ್ಚು. ಆಗಾಗ ಸಾಮಾಜಿಕ ಜಾಲತಾಣದಲ್ಲೂ ಈ ನಾಯಿಯ ಜತೆಗಿನ ಮುದ್ದಾದ ಸೆಲ್ಫೀ ಹಂಚಿಕೊಂಡು ಕೊಹ್ಲಿ ಖುಷಿಪಡುತ್ತಾರೆ.