Publish Date: Wed, 08 Nov 2017 (09:39 IST)
Updated Date: Wed, 08 Nov 2017 (09:41 IST)
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ ಗೆದ್ದಿತ್ತು. ಆದರೆ ಈ ಗೆಲುವಿಗೆ ಧೋನಿಯೇ ಕಾರಣ ಎನ್ನುವುದು ಬಹಿರಂಗವಾಗಿದೆ.
ಕೊನೆಯ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾರನ್ನು ಕಣಕ್ಕಿಳಿಸಲು ಧೋನಿ ಮತ್ತು ರೋಹಿತ್ ಶರ್ಮಾ ಸಲಹೆ ನೀಡಿದ್ದರು. ಹೀಗಾಗಿಯೇ ಬುಮ್ರಾರನ್ನು ಕಣಕ್ಕಿಳಿಸಲಾಯಿತು. ಇದರಿಂದಾಗಿ ನಮ್ಮ ಗೆಲುವು ಸುಲಭವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಒತ್ತಡದ ಸನ್ನಿವೇಶದಲ್ಲಿ ಧೋನಿ ಮತ್ತು ರೋಹಿತ್ ನನ್ನ ಬಳಿ ಬಂದು ಕೊನೆಯ ಎರಡು ಓವರ್ ಗಳನ್ನು ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಕೈಯಲ್ಲಿ ಮಾಡಿಸಲು ಸಲಹೆ ನೀಡಿದರು. ಅದರಂತೆ ಯೋಜನೆ ಮಾಡಿದೆವು. ಯಶಸ್ಸೂ ಕಂಡೆವು ಎಂದು ಕೊಹ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ