Publish Date: Tue, 07 Nov 2017 (08:59 IST)
Updated Date: Tue, 07 Nov 2017 (09:02 IST)
ತಿರುವನಂತಪುರಂ: ಸರಣಿ ಗೆಲ್ಲಬೇಕಾದರೆ ಉಭಯ ತಂಡಕ್ಕೂ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಆದರೆ ತಿರುವನಂತಪುರಂನ ಗ್ರೀನ್ ಫೀಲ್ಡ್ ನಲ್ಲಿ ಇಂದು ಪಂದ್ಯ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಅದಕ್ಕೆ ಕಾರಣ ಮಳೆ. ನಿನ್ನೆಯ ಮಳೆಗೆ ಮೈದಾನ ಪೂರ್ತಿ ಕೆಸರು ಗೆದ್ದೆಯಂತಾಗಿತ್ತು. ಇಂದೂ ಕೂಡಾ ಮಳೆ ಬರುವ ನಿರೀಕ್ಷೆಯಿದ್ದು, ಮೈದಾನ ಒಣಗಿಸಿ ಪಂದ್ಯಕ್ಕೆ ಸಿದ್ಧ ಮಾಡಿಕೊಡಲೂ ಸಿಬ್ಬಂದಿಗಳಿಗೆ ಅವಕಾಶವಿಲ್ಲದಂತಾಗಿದೆ.
29 ವರ್ಷಗಳ ಬಳಿಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆದರೆ ಮಳೆ ಎಲ್ಲದಕ್ಕೂ ತಣ್ಣೀರೆರಚದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ. ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದ್ದು, ಒಂದು ವೇಳೆ ಮಳೆಬಂದರೂ 15 ನಿಮಿಷದಲ್ಲಿ ಮೈದಾನ ಸಿದ್ಧಗೊಳಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೊಂಡಿದೆ. ಆದರೆ ಅದು ಎಷ್ಟು ನಿಜವಾಗುತ್ತದೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ