Publish Date: Mon, 22 Jul 2019 (09:05 IST)
Updated Date: Mon, 22 Jul 2019 (09:07 IST)
ಮುಂಬೈ: ಧೋನಿ ಯಾವಾಗ ನಿವೃತ್ತಿ ಆಗೋದು? ವಿಶ್ವಕಪ್ ಮುಗಿದ ಮೇಲೆ ನಿವೃತ್ತಿಯಾಗುತ್ತಾರಾ ಎಂದೆಲ್ಲಾ ಆಗಾಗ ಎದುರಾಗುವ ಪ್ರಶ್ನೆಗಳಿಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಉತ್ತರ ನೀಡಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿದ ಬಳಿಕ ತಂಡ ಪ್ರಕಟಿಸುವಾಗ ಸುದ್ದಿಗೋಷ್ಠಿಯಲ್ಲಿ ಪ್ರಸಾದ್ ಗೆ ಧೋನಿ ನಿವೃತ್ತಿ ಕುರಿತು ಪ್ರಶ್ನೆ ಎದುರಾಯಿತು.
ಇದಕ್ಕೆ ಖಡಕ್ ಉತ್ತರ ಕೊಟ್ಟ ಪ್ರಸಾದ್ ‘ಧೋನಿಯಂತಹ ದಿಗ್ಗಜ ಆಟಗಾರನಿಗೆ ಯಾವಾಗ ನಿವೃತ್ತಿಯಾಗಬೇಕೆಂದು ಗೊತ್ತಿದೆ’ ಎಂದಿದ್ದಾರೆ. ಆ ಮೂಲಕ ಧೋನಿ ಸದ್ಯಕ್ಕೆ ನಿವೃತ್ತಿಯಾಗಲ್ಲ ಎಂಬ ಸೂಚನೆ ನೀಡಿದ್ದಾರೆ. ಇನ್ನು, ವಿಂಡೀಸ್ ಸರಣಿಗೆ ತಾನು ಲಭ್ಯವಿರುವುದಿಲ್ಲ ಎಂದು ಧೋನಿ ಮೊದಲೇ ಹೇಳಿರುವುದಾಗಿ ಎಂಎಸ್ ಕೆ ಪ್ರಸಾದ್ ಈ ಮೊದಲೇ ಸ್ಪಷ್ಟನೆ ನೀಡಿದ್ದರು.