Publish Date: Sat, 11 Apr 2020 (09:21 IST)
Updated Date: Sat, 11 Apr 2020 (09:23 IST)
ರಾಂಚಿ: ಲಾಕ್ ಡೌನ್ ನಿಂದಾಗಿ ತಮ್ಮ ಮನೆಯಲ್ಲೇ ಬಂಧಿಯಾಗಿರುವ ಕ್ರಿಕೆಟಿಗರು ಈಗ ಮನೆಗೆಲಸ ಮಾಡುತ್ತಿದ್ದಾರೆ. ಅದರಲ್ಲೂ ಹಿರಿಯ ಕ್ರಿಕೆಟಿಗ ಧೋನಿಯಂತೂ ಗಾರ್ಡನರ್ ಆಗಿದ್ದಾರೆ!
ತಮ್ಮ ಫಾರ್ಮ್ ಹೌಸ್ ನಲ್ಲಿರುವ ಧೋನಿ ಹುಲ್ಲು ಕತ್ತರಿಸುತ್ತಿರುವ ಫೋಟೋವನ್ನು ಅವರ ಪತ್ನಿ ಸಾಕ್ಷಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ಧೋನಿ ಈಗ ಐಪಿಎಲ್ ನಲ್ಲಿ ಆಡಬೇಕಿತ್ತು. ಆದರೆ ಕೊರೋನಾದಿಂದಾಗಿ ಐಪಿಎಲ್ ಸರಣಿ ನಡೆಯುತ್ತಿಲ್ಲ. ಹೀಗಾಗಿ ಧೋನಿ ತಮ್ಮ ಬಿಡುವಿನ ವೇಳೆಯಲ್ಲಿ ಮೆಚ್ಚಿನ ಕೆಲಸ ಮಾಡುತ್ತಿದ್ದಾರೆ.