Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಪರ ಶತಕ ದಾಖಲಿಸಿದ ದೇವದತ್ತ್ ಪಡಿಕ್ಕಲ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಇದು ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಪಾಲಿಗೆ ಸತತ ನಾಲ್ಕನೇ ಶತಕವಾಗಿತ್ತು. ಈ ಮೂಲಕ ಸತತವಾಗಿ ನಾಲ್ಕು ಶತಕ ಗಳಿಸಿ ದಾಖಲೆ ಮಾಡಿದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಈ ದಾಖಲೆ ಮಾಡಿದ್ದರು. ನಿನ್ನೆಯ ಪಂದ್ಯದಲ್ಲಿ ಅವರು 101 ರನ್ ಗಳಿಸಿದ್ದರು. ಇದೇ ಪಂದ್ಯದಲ್ಲಿ ಕರ್ನಾಟಕ ಇನ್ನೊಬ್ಬ ಬ್ಯಾಟ್ಸ್ ಮನ್ ರವಿಕಾಂತ್ ಸಮರ್ಥ್ ಕೂಡಾ ಶತಕ ಗಳಿಸಿದ್ದರು.
ಆದರೆ ದೇವದತ್ತ್ ಪಡಿಕ್ಕಲ್ ಇದಕ್ಕೂ ಮೊದಲು ಒಡಿಶಾ ವಿರುದ್ಧ 152, ಕೇರಳ ವಿರುದ್ಧ 126, ರೈಲ್ವೇಸ್ ವಿರುದ್ಧ 145 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ದೇವದತ್ತ್ ಪಡಿಕ್ಕಲ್ ಕಳೆದ ಸೀಸನ್ ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವುದು ನೋಡಿದರೆ ಸದ್ಯದಲ್ಲೇ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಖಾಯಂ ಆದರೂ ಅಚ್ಚರಿಯಿಲ್ಲ.