ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲೀಗ ಸಾವಿನ ಸೂತಕ ಆವರಿಸಿದೆ. ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಕೊಹ್ಲಿಗೆ ಸಾವಿನ ಶಾಕ್ ಸಿಕ್ಕಿದೆ.
ಕೊಹ್ಲಿಗೆ ಈ ಆಘಾತ ತಂದಿಕ್ಕಿರುವುದು ಅವರ ಮೆಚ್ಚಿನ ನಾಯಿ ಬ್ರೂನೋ. ಬ್ರೂನೋ ಸಾವನ್ನಪ್ಪಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕೊಹ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಈ ನಾಯಿ 11 ವರ್ಷದಿಂದ ಕೊಹ್ಲಿ ಜತೆಗಿತ್ತು. ಈ 11 ವರ್ಷದಲ್ಲಿ ನಮ್ಮನ್ನು ಖುಷಿಪಡಿಸಿದ್ದೀಯಾ. ಈಗ ಇನ್ನೂ ಒಳ್ಳೆಯ ಜಾಗಕ್ಕೆ ಹೋಗಿದ್ದೀಯಾ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.